ಮದುವೆಯಾಗಿ ಸ್ವಲ್ಪ ದಿನಗಳವರೆಗೆ ಜೀವನ ಅಂದರೆ ಸ್ವರ್ಗದಂತಿದೆ ಅನ್ನುವವರು, ಸ್ವಲ್ಪ ಕಾಲದ ಬಳಿಕ ಇಷ್ಟು ಬೇಗ ಮದುವೆಯಾಗಬಾರದಿತ್ತು, ಮದುವೆಯಾದ ಮೇಲೆ ಇದ್ದ ಖುಷಿ ಮತ್ತು ಸ್ವತಂತ್ರ ಇಲ್ಲದಂತಾಯಿತು ಎಂದು ಗೊಣಗುವುದನ್ನು ಕೇಳುತ್ತೇವೆ. ಅಲ್ಲದೆ ಮದುವೆಯಾದ ಮೊದಲಿನಲ್ಲಿ ತನ್ನ ಮದುವೆಯಾಗದ ಸ್ನೇಹಿತರ ಹತ್ತಿರ ಬೇಗ ಒಂದು ಮದುವೆ ಮಾಡಿಕೊ ಅನ್ನುವವರು ಒಂದು ವರ್ಷದ ಬಳಿಕ ಸಿಕ್ಕಿದಾಗ ಮದುವೆಗೆ ಅವಸಾರ ಮಾಡಬೇಡ ಎಂಬ ಹಿತೋಪದೇಶ ಮಾಡುತ್ತಾರೆ! ಮದುವೆಯ ನಂತರ ಗಂಡ-ಹೆಂಡತಿ ನಡುವೆ ವಾದ-ವಿವಾದಗಳು ಹಣ, ಆಸ್ತಿ, ಮಾಜಿ ಸ್ನೇಹಿತ ಅಥವ ಸ್ನೇಹಿತೆ, ಮನೆ ಕೆಲಸ, ಪೋಷಕರು, ಜವಬ್ದಾರಿ ಹೀಗೆ ಇವುಗಳ ಸುತ್ತನೇ ಹೆಚ್ಚಾಗಿ ಇರುತ್ತದೆ. ಚಿಕ್ಕದಾಗಿ ಪ್ರಾರಂಭವಾಗುವ ನಂತರ ದೊಡ್ಡ ರಂಪಾಟಕ್ಕೆ ಕೂಡ ಕಾರಣವಾಗುವುದು. ಆಗ ಈ ಕೆಳಗಿನ ಅಂಶಗಳು ದೊಡ್ಡ ವಿಷಯವಾಗಿರುತ್ತದೆ.
ನೀನು ನನ್ನ ಪ್ರೀತಿಸುತ್ತಿಲ್ಲ: ಮದುವೆಯಾದ ಶುರುವಿನಲ್ಲಿ ಪ್ರಣಯ ಪಕ್ಷಿಗಳಂತೆ ಇರುತ್ತಾರೆ. ಹಾಗಂತ ಯಾವತ್ತೂ ಇರಲು ಸಾಧ್ಯವಿಲ್ಲ. ಅದರಲ್ಲೂ ಪುರುಷರಿಗೆ ಹೆಚ್ಚು ಜವಬ್ದಾರಿ ಹೆಚ್ಚಾಗುವುದರಿಂದ ಹೆಚ್ಚಿನ ಸಮಯವನ್ನು ಜೊತೆಯಲ್ಲಿ ಕಳೆಯಲು ಆಗದೇ ಹೋಗಬಹುದು. ಆದರೆ ಇದನ್ನೇ ತುಂಬಾ ಹೆಣ್ಣು ಮಕ್ಕಳು ಅಪಾರ್ಥ ಮಾಡಿಕೊಳ್ಳುತ್ತಾರೆ. ಅದರಲ್ಲೂ ಪ್ರೀತಿಸಿ ಮದುವೆಯಾದ ಹೆಣ್ಣು ಮಕ್ಕಳಂತೂ ಈ ವಿಷಯದಲ್ಲಿ ತುಂಬಾ ಕೊರಗುತ್ತರೆ. ಮದುವೆಗೆ ಮುಂಚೆ ನನ್ನ ನೋಡಲು ಬರಲು ಯಾವುದೇ ಬ್ಯೂಸಿ ಇರಲಿಲ್ಲ, ಸಿನಿಮಾ, ಪಾರ್ಕ್ ಅಂತ ಸಮಯ ಕಳಿಯುತ್ತಿದ್ದವು ಆದರೆ ಮದುವೆಯಾದ ಮೇಲೆ ಬದಲಾಗಿದ್ದಾರೆ. ಈಗ ನನ್ನ ಮುಂಚಿನಂತೆ ಪ್ರೀತಿಸುತ್ತಿಲ್ಲ ಅಂತ ಸುಮ್ಮನೆ ಕೊರಗುತ್ತಾರೆ. ನನ್ನ ನೀನು ಮುಂಚೆಯಷ್ಟು ಪ್ರೀತಿಸುತ್ತಿಲ್ಲ ಅಂತ ಹೇಳಿ ಗಂಡನಿಗೆ ಕೊಪ ಬರುವಂತೆ ಮಾಡುತ್ತಾರೆ. ಇದರಿಂದ ಇಬ್ಬರ ಮಾನಸಿಕ ನೆಮ್ಮದಿ ಹಾಳಾಗುವುದು. ಆದರೆ ಈ ಸಮಯದಲ್ಲಿ ಹೆಣ್ಣು ಮಕ್ಕಳು ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸಬೇಕು. ಮುಂಚೆಯ ರೀತಿ ಮದುವೆಯ ನಂತರ ಕೂಡ ನಿಮ್ಮ ಹತ್ತಿರನೆ ಇದ್ದರೆ ಮುಂದಿನ ಜೀವನ ನಡೆಯ ಬೇಡ್ವೆ? ನೀವು ಅವರನ್ನು ಮೊದಲಿನಷ್ಟೆ, ಅದಕ್ಕಿಂತ ಹೆಚ್ಚೇ ಪ್ರೀತಿಸಿ. ಆಗ ಅವರಿಗೂ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುವುದು. ಏನೇ ವಿಷಯವಿದ್ದರೂ ಇಬ್ಬರೂ ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಎಲ್ಲಾ ನಿರ್ಧಾರವನ್ನು ಇಬ್ಬರೂ ಜೊತೆಗೂಡಿ ಕೈಗೊಳ್ಳಬೇಕು. ಈ ರೀತಿ ಮಾಡಿದರೆ ಒಬ್ಬರನ್ನೊಬ್ಬರು ನಿರ್ಲಕ್ಷ್ಯ ಮಾಡಿದಂತಾಗುವುದಿಲ್ಲ, ಸಂಬಂಧ ಗಟ್ಟಿಯಾಗುವುದು.
ನಂಬಿಕೆ : ಸಂಸಾರ ಎಂಬ ದೋಣಿ ಸಾಗಲು ನಂಬಿಕೆ ಅನ್ನುವುದು ಮುಖ್ಯ. ನಂಬಿಕೆಯಿಲ್ಲದಿದ್ದರೆ ಆ ಸಂಬಂಧ ಮುರಿದು ಬೀಳುವುದು ಖಂಡಿತ. ಗಂಡ-ಹೆಂಡತಿ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಒಬ್ಬರ ಮೇಲೆ ತುಂಬಾ ನಂಬಿಕೆಯಿಟ್ಟರೆ ಅವರಿಗೆ ನಮ್ಮ ನಂಬಿಕೆಗೆ ದ್ರೋಹ ಬಗೆಯಲು ಮನಸ್ಸು ಬರುವುದಿಲ್ಲ. ಆದರೆ ಸಂಶಯ ಪಡುವ ಗುಣವಿದ್ದರೆ ಮುಂದೆ ನಿಮ್ಮ ಸಂಶಯ ನಿಜವಾಗುವುದು. ಏಕೆಂದರೆ ನೀವು ಅವರನ್ನು ಸಂಶಯ ಪಡುವಾಗ ಏಕೆ ಹಾಗೇ ಮಾಡಬಾರದು ಅನಿಸುತ್ತದೆ. ಅದು ಮನುಷ್ಯನ ಗುಣ. ಆದ್ದರಿಂದ ಸಂಸಾರದಲ್ಲಿ ಸಂಶಯ ಅನ್ನುವುದು ಬೇಡ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ