ಲಂಡನ್, ನ. 6: ಹದಿಹರಯದ ಶಾಲಾ ಬಾಲಕನೊಂದಿಗೆ 36 ವರ್ಷದ ಸುರಸುಂದರ ನರ್ಸ್ ಕಾಮಕೇಳಿ ನಡೆಸಿದ ಪ್ರಸಂಗವಿದು. ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ರೋಗಿಗಳ ಶುಶ್ರೂಷೆಯಲ್ಲಿ ತೊಡಗು ಎಂದು ಸರಕಾರ ಆಕೆಗಾಗಿ ಕಾರು ನೀಡಿದ್ದರೆ ವಿಕಿ ಹಾರ್ಸ್ಲೆ ಎಂಬ ಆ ಪುಣ್ಯಾತಗಿತ್ತಿ ಕಾರನ್ನು ಸೀದಾ ಬೀಚುಗಳತ್ತ ಓಡಿಸುತ್ತಿದ್ದಳು. ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ತನ್ನ ನೆಚ್ಚಿನ ಬಾಲಕನ ಜತೆ ಅಲ್ಲೆಲ್ಲ ಜಮ್ಮಚಕ್ಕ ಶುರುವಿಟ್ಟುಕೊಳ್ಳುತ್ತಿದ್ದಳು. 'ನರ್ಸ್ ವಿಕಿ ಹಾರ್ಸ್ಲೆ ಆ ಬಾಲಕನ ಜತೆ 10 ಬಾರಿ ಸಂಭೋಗ ನಡೆಸಿದ್ದಾಳೆ. ಅವಳ ಬೆಡ್ ರೂಮಿನಲ್ಲಿ ಇಬ್ಬರೂ ನಗ್ನರಾಗಿರುವುದನ್ನು ಪತ್ತೆ ಹಚ್ಚಲಾಗಿದೆ. ಒಮ್ಮೆ ಒಂದು ಬೀಚಿನಲ್ಲಿ ನರ್ಸ್ ನೇಕೆಡ್ ಆಗಿದ್ದುದೂ ಪತ್ತೆಯಾಗಿತ್ತು' ಎಂದು ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದ್ದಾರೆ. ಇದು ಸರಿ ಸುಮಾರು ಮೂರು ವರ್ಷಗಳ ಕಾಲ ನಡೆದಿದೆ. ಅಂದರೆ ಬಾಲಕ 13-14 ವರ್ಷದವನಾಗಿದ್ದಾಗಲೇ ಅವನೊಂದಿಗೆ ನರ್ಸ್ ವಿಕಿ ಹಾರ್ಸ್ಲೆ ಸೆಕ್ಸ್ ಸುಖ ಕಾಣತೊಡಗಿದ್ದಾಳೆ. 'ನರ್ಸ್ ವಿಕಿ ಹಾರ್ಸ್ಲೆ ಜತೆ ಸಖತ್ತಾಗಿ ಮಜಾ ಮಾಡಿದೆ' ಎಂದು ಬಾಲಕ ತನ್ನ ಸ್ನೇಹಿತರ ಮುಂದೆ ಕೊಚ್ಚಿಕೊಂಡಾಗ ವಿಷಯ ಒಂದೊಂದಾಗಿ ಬಹಿರಂಗಗೊಂಡಿದೆ. ಒಂದು ಹಂತದಲ್ಲಿ ನರ್ಸ್ ಗರ್ಭಿಣಿಯಾಗಿದ್ದಾಳೆ ಎಂದು ಬಾಲಕ ಭಯಪಟ್ಟಾಗ ಇಡೀ ಸೆಕ್ಸ್ ಪುರಾಣ ಬಿಚ್ಚಿಕೊಂಡಿದೆ. ಸಾರ್ವಜನಿಕ ಪಾರ್ಕಿನಲ್ಲಿ ಇವರಿಬ್ಬರೂ ತಮ್ಮ ತಮ್ಮ ಕೆಳ ಉಡುಪನ್ನು ಜಾರಿಸಿಕೊಂಡು ನಿಂತಿದ್ದ ದೃಶ್ಯಗಳನ್ನು ಕಂಡವರೂ ಇದ್ದಾರೆ ಎಂದು ಪೊಲೀಸರು ನ್ಯಾಯಾಲಯದ ಗಮನ ಸೆಳೆದರು. ವಿವಾಹಿತೆಯೂ ಆಗಿರುವ ನರ್ಸ್ ಈಗ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ