ಶುಕ್ರವಾರ, ಡಿಸೆಂಬರ್ 2, 2011

ವಿಶ್ವದ ಪ್ರಥಮ ಸೆಕ್ಸ್ ಶಾಲೆಯಲ್ಲಿ ಎಲ್ಲಾ ಪ್ರಾಕ್ಟಿಕಲ್ಸ್!

ಆಸ್ಟ್ರೀಯಾ, ಡಿ.1: ವಿಶ್ವದ ಮೊದಲ ಸೆಕ್ಸ್ ಶಾಲೆ ನಮ್ಮದು ಎಂದು ಇಲ್ಲಿನ ಶಾಲೆಯೊಂದು ಹೆಮ್ಮೆಯಿಂದ ಹೇಳಿಕೊಂಡಿದೆ. ವೈ ಮರಿಯಾ ಥಾಮ್ಸನ್ ಎಂಬುವರು ಆರಂಭಿಸಿರುವ ಶಾಲೆಯಲ್ಲಿ ಕಾಮಸೂತ್ರದ ಸಂಪೂರ್ಣ ಪಾಠ ಹೇಳಿಕೊಡಲಾಗುತ್ತಿದೆ. 16 ವರ್ಷ ಮೇಲ್ಪಟ್ಟವರು ಶಾಲೆಗೆ ದಾಖಲಾಗಲು ಅರ್ಹರಾಗಿರುತ್ತಾರೆ. ಸೆಕ್ಸ್ ಸಂಬಂಧಿತ ಅಧ್ಯಯನದಲ್ಲಿ ತೊಡಗಲು ಇಚ್ಛಿಸುವವರು ವಿಯನ್ನಾದ ಕಚೇರಿಯಲ್ಲಿ 1,400 ಪೌಂಡ್ ಹಣ ತೆತ್ತು ಶಾಲೆಗೆ ತೆರಳಬಹುದು. ಸೆಕ್ಸಾರ್ಥಿಗಳಿಗೆ ವಿಶೇಷ ಡಾರ್ಮೆಂಟರಿಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಕೋರ್ಸ್ ಮುಗಿದ ನಂತರ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಮರಿಯಾ ಹೇಳುತ್ತಾರೆ. ಎಲ್ಲಾ ಪ್ರಾಕ್ಟಿಕಲ್: ಸೆಕ್ಸ್ ಪಾಠ ಪ್ರವಚನಕ್ಕಷ್ಟೇ ಸೀಮಿತವಾಗಿರುವುದಿಲ್ಲ. ನಮ್ಮಲ್ಲಿ ಥಿಯರಿಗಿಂತ ಪ್ರಾಕ್ಟಿಕಲ್ಸ್ ಗೆ ಮಹತ್ವ ಜಾಸ್ತಿ. ಸೆಕ್ಸ್ ಭಂಗಿಗಳು, ಉದ್ರೇಕಿಸುವ ತಂತ್ರಗಳು, ದೇಹ ರಚನೆ, ಮಾನಸಿಕ ಬದಲಾವಣೆ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲಲಿದ್ದೇವೆ ಎಂದು ಶಾಲೆಯ ಹೆಡ್ ಮೇಡಂ ಹೇಳಿದ್ದಾರೆ. ವಿವಾದಿತ ಶಾಲೆಗೆ ಎಷ್ಟು ಜನ ಸೇರಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಶಾಲೆ ಭರ್ಜರಿ ಹಿಟ್ ಆಗುವ ಸಾಧ್ಯತೆಯಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ