ಭಾನುವಾರ, ಆಗಸ್ಟ್ 11, 2013

"ಓಕೆ ಓಕೆ ಎಲ್ಲ ಹೇಳ್ತೀನಿ. ಆದರೆ, ಈ ಇಬ್ಬರು ಮುದ್ದು ಮಕ್ಕಳು ಹೇಗೆ ಹುಟ್ಟಿದವು ?


ಒಂದೂರಿನಲ್ಲಿ ಹತ್ತುಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗಳು ಅತ್ಯಂತ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದರು. ಗಂಡ ಉತ್ತಮ ಉದ್ಯೋಗದಲ್ಲಿದ್ದ, ಹೆಂಡತಿ ಸಂಸಾರವನ್ನು ನೀರಿನಲ್ಲಿ ದೋಣಿ ತೇಲಿದಂತೆ ಸಾಗಿಸಿಕೊಂಡು ಹೋಗುತ್ತಿದ್ದಳು. ಸುಖ ಸುಪ್ಪತ್ತಿಗೆ ಕೊರತೆಯಿರಲಿಲ್ಲ. ಅವರಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳು. ನೋಡಿದವರಿಗೆ ಕಿಚ್ಚು ಹಚ್ಚುವಂತಿತ್ತು ಅವರ ಸಂಸಾರ. ಗಂಡನ ಬಗ್ಗೆ ಹೆಂಡತಿಗೆ ಯಾವ ತರಕಾರೂ ಇರಲಿಲ್ಲ. ಕೇಳಿದ್ದೆಲ್ಲವನ್ನು ಕೊಡಿಸುತ್ತಿದ್ದ, ಅನಿರೀಕ್ಷಿತವಾಗಿ ಉಡುಗೊರೆ ತಂದು ಕೊಡುತ್ತಿದ್ದ, ಕೇಳಿದಾಗಲೆಲ್ಲ ಹಾಸಿಗೆಯ ಸುಖ ನೀಡುತ್ತಿದ್ದ. ಆದರೆ, ಆಕೆಗೆ ಒಂದು ಅನುಮಾನ ಯಾವಾಗಲೂ ಕಾಡುತ್ತಿತ್ತು. ಮೊದಲನೇ ರಾತ್ರಿಯಿಂದ ಹಿಡಿದು ಮದುವೆಯ ಹತ್ತನೇ ವಾರ್ಷಿಕೋತ್ಸವದವರೆಗೆ ಲೈಂಗಿಕ ಸುಖ ಹೊಂದುವಾಗ ಗಂಡ ಯಾವತ್ತೂ ಶಯನಾಗೃಹದ ಲೈಟ್ ಹಾಕಿರಲಿಲ್ಲ. ಕತ್ತಲು ಕತ್ತಲಲ್ಲಿಯೇ ಸುಖ ನೀಡಲು ಬಯಸುತ್ತಿದ್ದ. ಲೈಟು ಹಾಕಲು ಹೆಂಡತಿ ಹೇಳಿದಾಗಲೆಲ್ಲ ಗಂಡ ಬೇಡವೆನ್ನುತ್ತಿದ್ದ. ಕಾರಣ ಕೇಳಿದರೆ ಯಾವತ್ತೂ ಹೇಳಿರಲಿಲ್ಲ. ಇದರ ಮರ್ಮ ಏನೆಂದು ತಿಳಿಯಲೇಬೇಕೆಂದು ಹೆಂಡತಿ ಒಂದು ದಿನ ಪ್ಲಾನ್ ಮಾಡಿದಳು. ಮದುವೆಯ ಹತ್ತನೇ ವಾರ್ಷಿಕೋತ್ಸವದ ರಾತ್ರಿ ಆತನಿಗೆ ಗೊತ್ತಿಲ್ಲದಂತೆಯೆ ದಿಂಬಿನ ಬುಡದಲ್ಲಿ ಲೈಟ್ ಸ್ವಿಚ್ ಬರುವಂತೆ ವೈರ್ ಎಳೆದಿದ್ದಳು. ಪೆದ್ದ ಗಂಡನಿಗೆ ಹೆಂಡತಿಯ ಚಾಣಾಕ್ಷ ನಡೆ ಬಗ್ಗೆ ತಿಳಿದಿರಲಿಲ್ಲ. ಹೊತ್ತು ರಾತ್ರಿ ಹನ್ನೆರಡು ದಾಟಿತ್ತು, ಗಾಳಿಗೆ ಹಾರಾಡುತ್ತಿದ್ದ ಕಿಟಕಿಯ ಕರ್ಟನ್ ಬದಿಯಿಂದ ಚಂದ್ರಾಮ ಇಣುಕಿಣುಕಿ ನೋಡುತ್ತಿದ್ದ, ಇಬ್ಬರ ಮೈಮೇಲೆ ಎಳೆನೂಲೂ ಇರಲಿಲ್ಲ, ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದ ಹೆಂಡತಿ, ಆತನಿಗೆ ತಿಳಿಯದಂತೆ ಇದ್ದಕ್ಕಿದ್ದಂತೆ ಟ್ಯೂಬ್ ಲೈಟ್ ಹಾಕಿಬಿಟ್ಟಳು. ದೀಪ ಝಗಮಗಿಸುತ್ತಿದ್ದಂತೆ ಗಂಡ ಆವಾಕ್ಕಾಗಿಬಿಟ್ಟ, ಹೆಂಡತಿ 'ವಾಟ್ ಈಸ್ ದಿಸ್' ಎಂದು ಹೌಹಾರಿಬಿಟ್ಟಳು. ನಿಮಿರು ವೈಫಲ್ಯ ಅನುಭವಿಸುತ್ತಿದ್ದ ಗಂಡ ತನ್ನ ಸ್ವಂತ ಅಸ್ತ್ರವನ್ನು ಬಳಸುವ ಬದಲು ಆಟಿಕೆಯನ್ನು ಬಳಸುತ್ತಿದ್ದ. ಸಿಟ್ಟಿಗೆದ್ದ ಆಕೆ, "ಡಾರ್ಲಿಂಗ್, ಇದೇನಿದು? ಇದೇನಾ ನೀನಿಷ್ಟು ವರ್ಷ ಮಾಡುತ್ತಿದ್ದುದು? ಯಾಕೆ ಹೀಗೆ ಮಾಡಿದೆ? ಕ್ಷಣದಲ್ಲೇ ಎಲ್ಲ ವಿವರಗಳನ್ನು ನೀಡು" ಎಂದು ಕಿರುಚಲು ಪ್ರಾರಂಭಿಸಿದಳು. ಇಷ್ಟೆಲ್ಲ ಕಿರುಚುತ್ತಿದ್ದರೂ ಸಮಾಧಾನದಿಂದಲೇ ಇದ್ದ ಗಂಡ, "ಓಕೆ ಓಕೆ ಎಲ್ಲ ಹೇಳ್ತೀನಿ. ಆದರೆ, ಇಬ್ಬರು ಮುದ್ದು ಮಕ್ಕಳು ಹೇಗೆ ಹುಟ್ಟಿದವು ಎಂಬುದನ್ನು ನನಗೆ ಮೊದಲು ವಿವರಿಸು" ಎಂದು ಮರುಪ್ರಶ್ನೆ ಹಾಕಿದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ