ತಂತ್ರಜ್ಞಾನದ ಬಳಕೆ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ. ಸಾಮಾನ್ಯವಾದ ಬರೆಯುವ ಪೆನ್ ನಿಂದ ಹಿಡಿದು ನಿಮ್ಮ ಕೆಲಸ ಮಾಡಿಕೊಡುವ, ತನ್ನದೇ ಬುದ್ಧಿಶಕ್ತಿ (Artificial Intelligence) ರೊಬೋಟ್ ಗಳ ವರೆಗೆ ಎಲ್ಲದರಲ್ಲೂ ತಂತ್ರಜ್ಞಾನ ವ್ಯಾಪಿಸಿಕೊಂಡಿದೆ. ಒಬ್ಬ ಗಂಡಸು ಎಷ್ಟೇ ಸರ್ವ ಸ್ವತಂತ್ರವಾಗಿ ಜೀವನ ನಡೆಸುತ್ತೇನೆ ಎಂದುಕೊಂಡರೂ, ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬಾಕೆ ಇದ್ದರೆ ಜೀವನ ಅರ್ಥಪೂರ್ಣವಾಗಿರುತ್ತದೆ. ಹಾಗಾಗಿ ತಂತ್ರಜ್ಞಾನದ ಸಹಾಯದಿಂದ ಸಂಬಂಧ ಬೆಸೆಯಲು, ಜೀವನ ಮಟ್ಟವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಬಳಸುತ್ತಿದ್ದೇವೆ. ಇತ್ತೀಚಿಗೆ ತಂತ್ರಜ್ಞಾನವನ್ನು ರತಿ ಸುಖಕ್ಕೂ ಕೂಡ ಬಳಸಿಕೊಳ್ಳಲಾಗುತ್ತಿದೆ. ಇಂತಹ ಐಡಿಯಾವನ್ನ ಉಪಯೋಗಿಸಿ ವಿಶ್ವದ ಮೊದಲ ರತಿ ಸುಖ ಕೊಡುವ ರೊಬೋಟ್ ಒಂದನ್ನು ತಯಾರಿಸಿದ್ದಾನೆ, ಟ್ರೂ ಕಂಪಾನಿಯನ್ ಎಂಬ ಕಂಪನಿ ನಡೆಸುವ, ಡೌಗ್ಲಾಸ್ ಹೈನ್ಸ್ ಎಂಬಾತ. RoXXXy ಎಂಬ ಹೆಸರಿನ ಈ ರೊಬೋಟ್ ಕೃತಕ ಬುದ್ಧಿಮತ್ತೆ ಹೊಂದಿದ್ದು (Artificial Intelligence) ನಿಜವಾದ ಹುಡುಗಿಗೆ ಇರುವ ಎಲ್ಲ ಫೀಚರುಗಳನ್ನು ಹೊಂದಿದೆ. 5.7 ಅಡಿ ಇರುವ ಈ ಸೆಕ್ಸಿ RoXXXy , 54 kg ಭಾರ ಇದ್ದಾಳೆ. 5 ರೀತಿಯ ವಿವಿಧ ಗುಣಗಳ ಮಾಡಲ್ ಗಳನ್ನು ಡೌಗ್ಲಾಸ್ ಹೈನ್ಸ್ ತಯಾರಿಸಿದ್ದಾನೆ. ವಯರ್ಲೆಸ್ಸ್ ಇಂಟರ್ನೆಟ್ ಗೆ ಈಕೆಯನ್ನು ಲಿಂಕ್ ಮಾಡುವ ಸೌಲಭ್ಯವಿದ್ದು, ತನ್ನ ಒಡೆಯನಿಗೆ ಇಮೇಲ್ ಗಳನ್ನೂ ಕಳಿಸಬಹುದು. ಅಂದಹಾಗೆ ಈ ರೊಬೋಟ್ ನ ಬೆಲೆ 995 ಡಾಲರ್ ಅಂತೆ. ಕಾಮವನ್ನು ತಣಿಸಿಕೊಳ್ಳಲು ಏನೆಲ್ಲ ಸಾಧನಗಳಿವೆಯಪ್ಪ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ