ಗುರುವಾರ, ಅಕ್ಟೋಬರ್ 17, 2013

ಸೆಕ್ಸ್‌ ಗೊಂಬೆ ಮಾರಾಟಗಾರನ ಬಂಧನ.

ದೆಹಲಿ , ಮಂಗಳವಾರ, 15 ಅಕ್ಟೋಬರ್ 2013

ಕೆರಳಿದ ಕಾಮವನ್ನು ಕೃತಕವಾಗಿ ತಣಿಸುವ ಸೆಕ್ಸ್ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ದೆಹಲಿ ಪೋಲೀಸರು ಇಂದು ಬಂಧಿಸಿದ್ದಾರೆ. ಭಾರತದಲ್ಲಿ ನಿಷೇಧಿಸಲಾಗಿರುವ ಈ ಸೆಕ್ಸ್ ಗೊಂಬೆಗಳನ್ನು ಚೀನಾದಿಂದ ಭಾರತಕ್ಕೆ ಅಕ್ರಮವಾಗಿ ತಂದು ದೆಹಲಿ ಮೂಲದ ಗುರುಬೀರ್‌ ಸಿಂಗ್‌ ಎಂಬ ವ್ಯಕ್ತಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು. ಚೀನಾದಲ್ಲಿ ತಯಾರಿಸಲ್ಪಡುವ ಇಂತಹ ಸೆಕ್ಸ್‌ ಗೊಂಬೆಗಳನ್ನು ಜಗತ್ತಿನಾದ್ಯಂತ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ. ಭಾರತದ ಸಂಪ್ರದಾಯಗಳಿಗೆ ಇದು ವಿರುದ್ಧವಾಗಿದ್ದರಿಂದ ಇಂತಹ ಸೆಕ್ಸ್ ಗೊಂಬೆಗಳನ್ನು ಭಾರತದಲ್ಲಿ, ನಿಶೇಧಿಸಲಾಗಿತ್ತು. ಆದಾಗ್ಯೂ ಕೂಡ ಈ ಸೆಕ್ಸ್‌ ಗೊಂಬೆಗಳು ಭಾರತದಲ್ಲಿ ಸುಮಾರು 100 ಕೋಟಿಗಳಿಗೂ ಹೆಚ್ಚಿನ ಮೌಲ್ಯದ ವ್ಯಾಪಾರ ವಹಿವಾಟನ್ನು ಹೊಂದಿದೆ ಎಂಬ ಸ್ಪೋಟಕ ಮಾಹಿತಿ ಪತ್ತೆಯಾಗಿದೆ. ಈ ಸೆಕ್ಸ್ ಗೊಂಬೆಗಳ ಬೆಲೆ ಕನಿಷ್ಟ 500 ರೂಪಾಯಿಗಳಿಂದ ಹಿಡಿದು, ಗರಿಷ್ಟ 15,000 ರೂಪಾಯಿಗಳವರೆಗೆ ಇದೆ ಎಂದು ಬಂಧಿತ ಗುರುಬೀರ್‌ ಸಿಂಗ್‌ ಬಾಯಿ ಬಿಟ್ಟಿದ್ದಾನೆ. ಒಂದೊಂದು ಗೊಂಬೆಗಳೂ, ಸೆಕ್ಸ್ ಎಕ್ಸ್‌ಪರ್ಟ್‌ ಆಗಿದ್ದು, ಕಾಮಾಲಾಪನೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಅಭಿರುಚಿಯನ್ನು ಹೊಂದಿವೆಯಂತೆ. ಇಂತಹ ಸೆಕ್ಸ್‌ ಗೊಂಬೆಗಳನ್ನು ಹೆಚ್ಚಾಗಿ ಉತ್ಪಾದಿಸುವ ಚೀನಾ ದೇಶ ತಾನು ಉತ್ಪಾದಿಸುವ ಈ ಸೆಕ್ಸ್‌ ಗೊಂಬೆಗಳು ಜಗತ್ತಿನ ದೇಶಗಳಿಗೆ ರವಾನೆಯಾಗುತ್ತವೆ. ಅಮೇರಿಕ, ಜರ್ಮನ್, ಯೂರೋಪ್, ಇಂಗ್ಲೆಂಡ್‌, ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈ ಸೆಕ್ಸ್‌ ಗೊಂಬೆಗಳು ರವಾನೆಯಾಗುತ್ತಿವೆ. ಆದ್ರೆ ಭಾರತದಲ್ಲಿ ಈ ಸೆಕ್ಸ್‌ ಗೊಂಬೆಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಕಾಳ ಸಂತೆಯಲ್ಲಿ, ಕಳ್ಳಾಟಗಳಿಂದ ಗುಪ್ತವಾಗಿ ಇಂತಹ ಸೆಕ್ಸ್‌ ಗೊಂಬೆಗಳನ್ನು ಮಾರಾಟ ಮಾಡಲಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ