.
ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ವೈಟ್ ಹೌಸ್ ಇಂಟರ್ನಿ ಆಗಿದ್ದ ಸುಂದರಿ ಮೋನಿಕಾ ಲಿವೆನ್ಸ್ಕಿ ಜೊತೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧ ಸಂಪೂರ್ಣ ಮರೆಯಾಗುವ ಮುನ್ನವೆ ಮತ್ತೊಂದು ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿರುವ ಸುದ್ದಿ ಸ್ಫೋಟಗೊಂಡಿದೆ.
ಜಿಮ್ಮಿ ಕಾರ್ಟರ್ ಅವರು ಅಧ್ಯಕ್ಷರಾಗಿದ್ದಾಗ ಉಪಾಧ್ಯಕ್ಷರಾಗಿದ್ದ ವಾಲ್ಟರ್ ಮಾಂಡೇಲ್ ಅವರ ಮಗಳು ಎಲಿನಾರ್ ಮಾಂಡೇಲ್ ಅವರೊಂದಿಗೆ ಗುಪ್ತಗುಪ್ತವಾಗಿ ಚಕ್ಕಂದವಾಡಿರುವ ಸ್ವಾರಸ್ಯಕರ ವಿವರಗಳು ಎಲಿನಾರ್ ಅವರ ಡೈರಿಯಿಂದ ಹೊರಬರಲು ತವಕಿಸುತ್ತಿವೆ. ವಾಲ್ಟರ್ ಅವರು ಕಳೆದ ವಾರ ಮಿದುಳು ಕ್ಯಾನ್ಸರ್ ಗೆ ಬಲಿಯಾದರು.
ಈ ಬಿಸಿಬಿಸಿ ಸುದ್ದಿಯನ್ನು ಸ್ಫೋಟಗೊಳಿಸಿದ್ದು ನ್ಯಾಷನಲ್ ಎನ್ ಕ್ವೈರರ್ ಪತ್ರಿಕೆ. ಕ್ಲಿಂಟನ್ ಮತ್ತು ಎಲಿನಾರ್ ನಡುವಿನ ಸರಸದ ವಿವರಗಳು ತಮಗೆ ತಿಳಿದಿದೆ ಎಂದು ಪತ್ರಿಕೆ ಹೇಳಿದೆ. ಈ ಸುದ್ದಿ ಸ್ಫೋಟದಿಂದಾಗಿ ತೆರೆಮರೆಗೆ ಸರಿದಿರುವ ಮೋನಿಕಾ ಲಿವೆನ್ ಸ್ಕಿ ಮುಸುಮುಸು ನಗುತ್ತಿದ್ದರೆ, ಕ್ಲಿಂಟನ್ ಪತ್ನಿ ಹಿಲರಿ ಬುಸುಬುಸು ಆಡುತ್ತಿದ್ದಾರೆ.
ಅಮೆರಿಕಾದ ವಿದೇಶಾಂಕ ಕಾರ್ಯದರ್ಶಿಯಾಗಿರುವ ಹಿಲರಿ ಕ್ಲಿಂಟನ್ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಕೆಂಡದ ಮೇಲೆ ಮುಚ್ಚಿದ್ದ ಬೂದಿ ಹಾರಿಹೋದರೆ ಜಗತ್ತಿನಾದ್ಯಂತ ಸುದ್ದಿ ಹಲ್ಲಾಗುಲ್ಲಾ ಮಾಡುವುದೆಂದು ಚಿಂತೆಯಲ್ಲಿ ಹಿಲರಿ ಮುಳುಗಿದ್ದಾರೆ. ಆದರೆ, ಕಳೆದ ತಿಂಗಳು 16ರಂದು 65ನೇ ವರ್ಷಕ್ಕೆ ಕಾಲಿಟ್ಟ ಬಿಲ್ ಮಾತ್ರ ಬಿಲ್ ಕುಲ್ ತಲೆಕೆಡಿಸಿಕೊಳ್ಳದೆ ತಣ್ಣಗೆ ಕುಳಿತಿದ್ದಾರೆ.
ಅಮೆರಿಕ ಅಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿರುವ ಹಿಲರಿ ಕ್ಲಿಂಟನ್, ಬಿಲ್ ಕ್ಲಿಂಟನ್ ಚಕ್ಕಂದದ ವಿಷಯ ತಣ್ಣಗಾಗುತ್ತಿದ್ದಂತೆ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದರು. ಆದರೆ, ಮತ್ತೊಂದು ಲೈಂಗಿಕ ಹಗರಣದ ಅವರಿಗೆ ಹೊಸ ತಲೆನೋವು ತಂದಿಟ್ಟಿದೆ. ಇದರಿಂದಾಗಿ ರಾಜಕೀಯ ಭವಿಷ್ಯವೇ ನಿರ್ನಾಮವಾಗುವುದೆಂಬ ಕಳವಳದಲ್ಲಿ ಅವರು ಮುಳುಗಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ