ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಪುತ್ರ ಎಸ್.ಪಿ. ಚರಣ್ ಅವರು ತಮಿಳಿನ ಐಟಂ ಗರ್ಲ್ ಸೋನಾ ಹೀಡನ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರಂತೆ. ಇದನ್ನು ಬಹಿರಂಗಪಡಿಸಿರುವ ನಟಿ ಸೋನಾ, ಚರಣ್ ಹತ್ತು ದಿನಗಳೊಳಗೆ ಕ್ಷಮೆ ಯಾಚಿಸದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ!
ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿದ್ದ 'ಹುಡುಗಿಗಾಗಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಚರಣ್ ಅಸಭ್ಯವಾಗಿ ವರ್ತಿಸಿದ್ದಾರೆ. ಅಶ್ಲೀಲ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲದೆ, ಅವರು ನನ್ನ ಮೈಮೇಲೆ ಕೈ ಹಾಕಲು ಮುಂದಾದರು. ಇದಕ್ಕೆ ಅವರ ಜತೆಗಿದ್ದ ಇತರ ಇಬ್ಬರೇ ಸಾಕ್ಷಿ ಅಂತ ಸೋನಾ ದೂರಿದ್ದಾರೆ.
ಈ ಸಂಬಂಧ ಚೆನ್ನೈನ ಪಾಂಡಿ ಬಜಾರ್ ಪೊಲೀಸರಿಗೆ ದೂರು ನೀಡಿರುವ ಸೋನಾ, ಘಟನೆಯನ್ನು ವಿವರಿಸಿದ್ದು ಹೀಗೆ:
'ನಟ ವೈಭವ್ ರೆಡ್ಡಿಯವರ ಟಿ-ನಗರದಲ್ಲಿನ ಮನೆಯಲ್ಲಿ ನಡೆದ ಪಾರ್ಟಿಗೆ ನಾನು ಹೋಗಿದ್ದೆ. ಈ ಸಂದರ್ಭದಲ್ಲಿ ವಿಪರೀತ ಮದ್ಯ ಸೇವಿಸಿದ್ದ ಚರಣ್ ಅಸಭ್ಯವಾಗಿ ವರ್ತಿಸಿದರು. ಈ ಹಿಂದೆಯೂ ಚರಣ್ ಇದೇ ರೀತಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಆದರೂ ಸುಮ್ಮನಿದ್ದೆ. ಈಗ ರೋಸಿ ಹೋಗಿರುವ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಇಂತಹ ಪ್ರಸಂಗ ಮರು ಕಳಿಸಬಾರದು ಅನ್ನೋದು ನನ್ನ ಉದ್ದೇಶ' ಎಂದರು.
'ಚರಣ್ ಅವರಿಗೆ ಜತೆಯಲ್ಲಿದ್ದ ವೆಂಕಟ್ ಪ್ರಭು ಕೂಡ ಸಹಕಾರ ನೀಡಿದ್ದಾರೆ. ಅವರಿಬ್ಬರೂ ಸೇರಿಕೊಂಡು ನನ್ನನ್ನು ಕೆಡಿಸಲು ಯತ್ನಿಸಿದ್ದಾರೆ. ಚರಣ್ ಅವರಂತೂ ನನ್ನನ್ನು ಅನುಭವಿಸಲು ಮುಂದಾಗಿದ್ದರು. ಅವರಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದೇನೆ. ನಾನೊಬ್ಬಳು ನಟಿಯಾಗಿರಬಹುದು. ಅದು ನನ್ನ ವೃತ್ತಿ. ಹಾಗೆಂದು ನನಗೆ ಘನತೆ-ಗೌರವ ಇಲ್ಲವೆಂದು ಅವರು ಭಾವಿಸಿದಂತಿದೆ. ಅವರು ಕ್ಷಮೆ ಯಾಚಿಸಲೇಬೇಕು' ಅಂತ ಸೋನಾ ಬೇಡಿಕೆ ಮುಂದಿಟ್ಟಿದ್ದಾರೆ.
ಘಟನೆ ಬಗ್ಗೆ ಚರಣ್ ಮತ್ತು ವೆಂಕಟ್ ಪ್ರಭು, ಹಾಗೆ ನಡೆದೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಹೊಸ ಚಿತ್ರವೊಂದರ ಬಗ್ಗೆ ಆಕೆಯ ಜತೆ ಮಾತುಕತೆ ನಡೆಸಬೇಕೆಂದು ತುಂಬಾ ಹೊತ್ತಿನಿಂದ ಕರೆ ಮಾಡಲು ಯತ್ನಿಸುತ್ತಿದ್ದೇನೆ. ನನಗೆ ಈ ಸಂಗತಿ ಗೊತ್ತೇ ಇಲ್ಲ. ಅಂತಹ ಯಾವುದೇ ಘಟನೆ ಪಾರ್ಟಿಯಲ್ಲಿ ನಡೆದಿಲ್ಲ ಅಂತ ಆರೋಪವನ್ನು ನಿರಾಕರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ