ಬುಧವಾರ, ನವೆಂಬರ್ 2, 2011

ನಗ್ನ ಎಂಎಂಎಸ್ ಉದ್ಯಮಿ ಕೊನೆಗೂ ಬಲೆಗೆ ಬಿದ್ದ

ನವದೆಹಲಿ, ವಿವಾಹಿತ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ವಿವಸ್ತ್ರಗೊಳಿಸಿ ವಿಡಿಯೋ ಚಿತ್ರೀಕರಿಸಿ, ಎಂಎಂಎಸ್ ಹಂಚುತ್ತಿದ್ದ ಉದ್ಯಮಿಯನ್ನು ಕೊನೆಗೂ ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉದ್ಯಮಿ ತನಗೆ ಪರಿಚಯವಿದ್ದ ಮಹಿಳೆಯನ್ನು ಒಂದು ದಿನ ಮನೆಗೆ ಕರೆಯುತ್ತಾನೆ. ಪರಿಚಯಸ್ಥನೆಂದು ಮನೆಗೆ ಹೋದ ಮಹಿಳೆ ಜೊತೆ ಅನುಚಿತವಾಗಿ ವರ್ತಿಸತೊಡಗುತ್ತಾನೆ. ಉದ್ಯಮಿಯ ಇಂಗಿತ ಅರಿತ ಮಹಿಳೆ ಮನೆಯಿಂದ ಹೊರ ಹೋಗಲು ಯತ್ನಿಸಿದಾಗ, ಆಕೆಯನ್ನು ತಡೆದು ಹಿಂಸಿಸುತ್ತಾನೆ. ಆಕೆ ಮೈಮೇಲಿದ್ದ ಬಟ್ಟೆಗಳನ್ನು ಕಳಚಿ ವಿಡಿಯೋ ಚಿತ್ರೀಕರಿಸುತ್ತಾನೆ. ಮಹಿಳೆ ಎಷ್ಟು ಬೇಡಿದರೂ ಕೇಳದ ಆಕೆಯ ನಗ್ನ ಚಿತ್ರ, ವಿಡಿಯೋ ಚಿತ್ರೀಕರಿಸಿ ಗಹಗಹಿಸುತ್ತಾನೆ. ಕೊನೆಗೆ ಉದ್ಯಮಿಯಿಂದ ವಸ್ತ್ರ ಪಡೆದು ಮನೆಗೆ ಹಿಂತಿರುಗಿದ ಮಹಿಳೆ ತನ್ನ ಪತಿಗೆ ತನ್ನ ಗೋಳಿನ ಕಥೆ ಹೇಳುತ್ತಾಳೆ. ಇದಾದ ಒಂದು ವಾರದ ನಂತರ ಉದ್ಯಮಿಯನ್ನು ಬಂಧಿಸಿದ ದೆಹಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ