ಸೋಮವಾರ, ನವೆಂಬರ್ 7, 2011

ಪುಟಿನ್‌ಗೆ ಹಲವು ಮಹಿಳೆಯರ ಜತೆ ಅಕ್ರಮ ಸಂಬಂಧ: ವರದಿ

ರಷ್ಯಾದ ಪ್ರಧಾನಿ ವ್ಲಾಡಿಮಿರ್ ಪುಟಿನ್‌ ಅವರು ತಮ್ಮ ದೇಶದ ಗುಪ್ತಚರ ಸಂಸ್ಥೆ ಕೆಜಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪುಟಿನ್‌ ಪತ್ನಿ ಪೀಡಕರಾಗಿದ್ದರು ಹಾಗೂ ಹಲವಾರು ಮಹಿಳೆಯರೊಂದಿಗೆ ಅಕ್ರಮವಾಗಿ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ಜರ್ಮನಿಯ ಗುಪ್ತಚರ ಸಂಸ್ಥೆಯ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮೇಲ್‌ ಪತ್ರಿಕೆ ವರದಿ ಮಾಡಿದೆ. ಪುಟಿನ್‌ ಅವರು 1985ರಿಂದ 1990ರ ವರೆಗೆ ಪೂರ್ವ ಜರ್ಮನಿಯ ಡ್ರೆಸ್‌ಡೆನ್‌ ನಗರದಲ್ಲಿ ರಷ್ಯಾ ಗುಪ್ತಚರ ಸಂಸ್ಥೆಯ ನೇತೃತ್ವ ವಹಿಸಿದ್ದರು ಎಂದು ಡೈಲಿ ಮೇಲ್‌ ತಿಳಿಸಿದೆ. ಪುಟಿನ್‌ ಕುರಿತು ಜರ್ಮನಿಯ ಬೇಹುಗಾರಿಕಾ ಸಂಸ್ಥೆ ಬಿಎನ್‌ಡಿ ಸಂಗ್ರಹಿಸಿದ್ದ ರಹಸ್ಯ ಮಾಹಿತಿಗಳನ್ನು ಜರ್ಮನಿಯ ಮಾಧ್ಯಮಗಳು ಪ್ರಕಟಿಸಿದ್ದು, ಪುಟಿ‌ನ್‌ ಅವರ ಪತ್ನಿ ಲ್ಯುಡುಮಿಲಾ ಅವರು ತಮ್ಮ ಮದುವೆಯ ಕುರಿತು ಬಿಎನ್‌ಡಿ ಏಜೆಂಟ್‌ಗೆ ನೀಡಿರುವ ಮಾಹಿತಿಯೂ ಇದರಲ್ಲಿದೆ. ಪುಟಿನ್‌ ಅವರು ತಮಗೆ ದೈಹಿಕ ಹಿಂಸೆ ನೀಡುತ್ತಿದ್ದರಲ್ಲದೇ ಹಲವಾರು ಮಹಿಳೆಯರೊಂದಿಗೆ ಅಕ್ರಮವಾಗಿ ಲೈಂಗಿಕ ಸಂಪರ್ಕವನ್ನೂ ಹೊಂದಿದ್ದರು ಎಂದು ತಿಳಿಸಿದ್ದಾರೆ. ಜರ್ಮನಿಯ ಗುಪ್ತಚರ ಸಂಸ್ಥೆ ಬಿಎನ್‌ಡಿ ಕುರಿತು ಕುರಿತು ಹಲವಾರು ಪುಸ್ತಕಗಳನ್ನು ಬರೆದಿರುವ ಶುಮಿಡಿಟ್‌ ಈನ್‌ಬೂಮ್‌ ಅವರು ಪುಟಿನ್‌ ಅವರ ಕುರಿತ ರಹಸ್ಯ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ. 1990ರಲ್ಲಿ ಪುಟಿನ್‌ ಅವರು ಅಕ್ರಮ ಸಂಬಂಧದಿಂದ ಹುಟ್ಟಿದ್ದ ಮಗುವನ್ನು ತಮ್ಮ ವೋಲ್ಗಾ ಲ್ಯುಮೋಸಿನ್‌ ವಾಹನದಲ್ಲಿ ಕರೆದೊಯ್ಯುತ್ತಿದ್ದರು ಎಂಬ ವರದಿಯು ಪುಟಿನ್‌ ಅಕ್ರಮ ಸಂಬಂಧಕ್ಕೆ ಪುಷ್ಟಿ ನೀಡಿದಂತಾಗಿದೆ ಎಂದು ಜರ್ಮನಿಯ ಪತ್ರಿಕೆ ಬಿಲ್ಡ್‌ ತಿಳಿಸಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ