ಮಿಷಿಗನ್ (ಅಮೆರಿಕ), ಡಿ.2: ರಾಸಲೀಲೆ ಕುಖ್ಯಾತಿಯ ಬಿಡದಿ ಧ್ಯಾನಪೀಠಂನ ಸ್ವಾಮಿ ನಿತ್ಯಾನಂದಗೆ ಅತ್ಯಂತ ಸಮಾಧಾನ ತರುವ ಸುದ್ದಿಯೊಂದು ಅಮೆರಿಕದಿಂದ ಬಂದಿದೆ. ಚಿತ್ರ ನಟಿ ಜತೆ ಸ್ವಾಮಿ ನಿತ್ಯಾನಂದ ಅವರು ರಾಸಲೀಲೆ ನಡೆಸಿದ್ದಾರೆ ಎನ್ನಲಾದ ದೃಶ್ಯಗಳನ್ನೊಳಗೊಂಡ ವಿಡಿಯೋ ಟೇಪಿನ ಸತ್ಯಾಸತ್ಯದ ಬಗ್ಗೆ ಅಮೆರಿಕದ ತಜ್ಞರು ವರದಿ ಸಲ್ಲಿಸಿದ್ದು, ಟೇಪು ಒರಿಜಿನಲ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದು ನಿತ್ಯಾನಂದರ ವಿರುದ್ದದ ಆರೋಪಗಳಿಗೆ ಉತ್ತರವಾಗಲಿದೆಯಾ? ನಿತ್ಯಾನಂದ ರಾಸಲೀಲೆ ಪ್ರಕರಣದ ಮೇಲೆ ಇದು ಎಷ್ಟು ಪರಿಣಾಮ ಬೀರಲಿದೆ? ನಿತ್ಯಾನಂದ ಪ್ರಕರಣದಿಂದ ಬಚಾವಾಗಲು ಇದು ನೆರವಾಗುತ್ತದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಮೆರಿಕದಲ್ಲಿ ಅನೇಕ ಕೋರ್ಟ್ ಪ್ರಕರಣಗಳಲ್ಲಿ ಇಂತಹ ವಿಡಿಯೋ ಟೇಪುಗಳ ಬಗ್ಗೆ ಅಧ್ಯಯನ ವರದಿ ನೀಡಿರುವ ಖ್ಯಾತ ವಿಧಿವಿಜ್ಞಾನ ಅಪರಾಧ ವಿಷಯತಜ್ಞ ಎಡ್ವರ್ಡ್ ಜೆ ಪ್ರೆಮ್ಯೂ ಅವರ ಪ್ರಕಾರ ನಿತ್ಯಾನಂದ ರಾಸಲೀಲೆ ಟೇಪ್ ಅಸಲಿ ಅಲ್ಲ. ಅದು ರಾಸಲೀಲೆ ಘಟನಾವಳಿಗಳನ್ನು ಯಥಾವತ್ತಾಗಿ, ನಿಖರವಾಗಿ ಚಿತ್ರೀಕರಿಸಿದ ವಿಡಿಯೋ ಅಲ್ಲ. ಅಸಲಿಗೆ ಈ ವಿಡಿಯೋ ಟೇಪೇ ಒರಿಜಿನಲ್ ಅಲ್ಲ. ಎರಡು ಪದರಗಳಿಂದ ತಯಾರಿಸಲಾದ ಟೇಪು ಇದಾಗಿದೆ. ವಿಚಾರಣೆಯ ವೇಳೆ ಯಾವುದೇ ನ್ಯಾಯಾಲಯವಾಗಲಿ ಇದನ್ನು ಸಾಕ್ಷಿಯನ್ನಾಗಿ ಪರಿಗಣಿಸಬಾರದು ಎಂದು ಎಡ್ವರ್ಡ್ ಪ್ರೆಮ್ಯೂ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಗಮನಾರ್ಹವೆಂದರೆ ಪೊಲೀಸರು ಈಗಾಗಲೇ ಸರಕಾರಿ ಪ್ರಯೋಗಾಲಯದಲ್ಲಿ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ವರದಿ ತರಿಸಿಕೊಂಡಿದ್ದು ಅದರ ಪ್ರಕಾರ ನಿತ್ಯಾನಂದ ರಾಸಲೀಲೆ ಟೇಪ್ ಅಸಲಿ ಎಂಬುದು ದೃಢಪಟ್ಟಿದೆ. ಕುತೂಹಲದ ಸಂಗತಿಯೆಂದರೆ ಅಸಲಿಗೆ ಪೊಲೀಸರು ಈ ವಿಡಿಯೋ ಟೇಪನ್ನು ಸಾಕ್ಷಿಯಾಗಿ ನ್ಯಾಯಾಲಯದಲ್ಲಿ ಮಂಡಿಸಬೇಕಾ ಅಥವಾ ಬೇಡವಾ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ