ಶನಿವಾರ, ಡಿಸೆಂಬರ್ 3, 2011

ಅನೈತಿಕ ಸಂಬಂಧ : ಗಂಡಸಿಗಷ್ಟೇ ಶಿಕ್ಷೆಯೇಕೆ? ಸುಪ್ರೀಂ

 
ನವದೆಹಲಿ, ಡಿ. 3 : ಅನೈತಿಕ ಸಂಬಂಧದ ಪ್ರಕರಣದಲ್ಲಿ ಪರ ಹೆಂಗಸಿನೊಂದಿಗೆ ಸರವಾಡಿದ ಗಂಡಸನನ್ನೇ ಏಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು? ಪರಸ್ಪರ ಒಪ್ಪಿಗೆ ನೀಡಿ ಲೈಂಗಿಕ ಕ್ರಿಯೆ ನಡೆಸಿದ ಹೆಂಗಸು ಕೂಡ ಅಪರಾಧಿಯಲ್ಲವೆ? ಆಕೆಯನ್ನೇಕೆ ಶಿಕ್ಷಿಸಬಾರದು?
ಈ ಪ್ರಶ್ನೆಗಳನ್ನು ಸುಪ್ರೀಂ ಕೋರ್ಟ್ ತನ್ನನ್ನು ತಾನೇ ಕೇಳಿಕೊಂಡಿದೆ. ಹಾಗೆಯೆ, ಅನೈತಿಕ ಸಂಬಂಧ ಮಾಡಿದ ಗಂಡಸನ್ನು ಮಾತ್ರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ಭಾರತೀಯ ದಂಡ ಸಂಹಿತೆಯ 497 ಸೆಕ್ಷನ್ ನಲ್ಲಿನ ನಿಯಮವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈ ನಿಯಮ ಮಹಿಳಾ ಪರವಾಗಿದೆ. ತಪ್ಪು ಮಾಡಿದ ಹೆಂಗಸರನ್ನು ಆರೋಪದ ಕೊಂಡಿಯಿಂದ ಕಳಚುವಂತೆ ಮಾಡುತ್ತದೆ. ಗಂಡಸರಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಪ್ರಕರಣವೊಂದರಲ್ಲಿ ನ್ಯಾ. ಅಫ್ತಾಬ್ ಆಲಂ ಮತ್ತು ನ್ಯಾ. ಆರ್ ಎಂ ಲೋಧಾ ಅವರು ಈ ಪ್ರಶ್ನೆಗಳನ್ನು ಎತ್ತಿದ್ದಾರೆ. ಐಪಿಸಿ ಸೆಕ್ಷನ್ ಏನು ಹೇಳುತ್ತದೆ : "ಯಾವುದಾದರೂ ಮಹಿಳೆ ಇನ್ನೊಬ್ಬರ ಹೆಂಡತಿ ಎಂದು ಗೊತ್ತಿದ್ದೂ, ಆತನ ಅನುಮತಿಯಿಲ್ಲದೆ ಆ ಮಹಿಳೆಯೊಂದಿಗೆ ಸಂಭೋಗ ನಡೆಸಿದರೆ, ಅದು ಅತ್ಯಾಚಾರವಾಗುವುದಿಲ್ಲ, ಆದರೆ ಅನೈತಿಕ ಸಂಬಂಧವಾಗುತ್ತದೆ. ಅಂಥ ಅಪರಾಧಕ್ಕೆ 5 ವರ್ಷವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸಲಾಗುತ್ತದೆ. ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯನ್ನು ಶಿಕ್ಷಿಸಬಾರದು." ಇದು ಯಾವ ನ್ಯಾಯ ಸ್ವಾಮಿ ಎಂದು ದೇಶದ ಸರ್ವೋಚ್ಚ ನ್ಯಾಯಾಲಯದ ಪೀಠದ ಮೇಲೆ ಕುಳಿತಿರುವ ಇಬ್ಬರು ನ್ಯಾಯಮೂರ್ತಿಗಳೇ ಪ್ರಶ್ನೆ ಎತ್ತಿದ್ದಾರೆ. ಏನು ಹೇಳುತ್ತೀರಿ ಇದಕ್ಕೆ?





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ