ಶುಕ್ರವಾರ, ಜುಲೈ 20, 2012

ಗಂಡು ಮಗುವಿಗೆ ಜನ್ಮ ನೀಡಿದ 9 ವರ್ಷದ ಬಾಲಕಿ!

ಚಂಗಚುನ್, ಜು. 20 : ಚೀನಾದ ಈಶಾನ್ಯ ಭಾಗದಲ್ಲಿ ಬಾಲಕಿಯೊಬ್ಬಳು 6 ಪೌಂಡ್ ತೂಕದ ಆರೋಗ್ಯವಂತ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಇದರಲ್ಲೇನು ವಿಶೇಷ ಅಂತೀರಾ? ಸಿಸೇರಿಯನ್ ಮುಖಾಂತರ ನಡೆದ ಪ್ರಸವ ಮಾಡಿಸಿಕೊಂಡ ಬಾಲಕಿಯ ವಯಸ್ಸು ಕೇವಲ 9 ಮಾತ್ರ! ಈ ಸುದ್ದಿಯನ್ನು ಚೀನಾದ ವೃತ್ತಪತ್ರಿಕೆ ವರದಿ ಮಾಡಿದೆ.
ಆ ಬಾಲಕಿಯನ್ನು ಆಸ್ಪತ್ರೆಗೆ ಕರೆತಂದಾಗ ಆ ಬಾಲೆ ಎಂಟೂವರೆ ತಿಂಗಳು ಗರ್ಭವತಿಯಾಗಿದ್ದಳು. ಈ ಪ್ರಾಂತ್ಯದಲ್ಲಿ 14 ವರ್ಷ ವಯಸ್ಸಿಗಿಂತ ಕಡಿಮೆಯಿರುವ ಬಾಲಕಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರಕ್ಕೆ ಸಮಾನ. ಡೇಲಿ ಮೇಲ್ ವರದಿಯ ಪ್ರಕಾರ, ಚೀನಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಾಲಕಿ ತಾಯಿಯಾಗಲು ಯಾರು ಕಾರಣ ಎಂಬುದನ್ನು ತಿಳಿಯಲು ವಿಚಾರಣೆ ನಡೆಸುತ್ತಿದ್ದಾರೆ.
ಚೀನಾದ ಕಾನೂನು ತಜ್ಞರು ಏನು ಹೇಳುತ್ತಾರೆಂದರೆ, 14 ವರ್ಷಕ್ಕಿಂತ ಕಿರಿಯ ಬಾಲಕಿಯ ಜೊತೆ ನಡೆಸಿದ ಲೈಂಗಿಕ ಸಂಪರ್ಕವನ್ನು ಪರಸ್ಪರ ಒಪ್ಪಿಗೆಯಿಂದ ನಡೆಸಿದ ಕ್ರಿಯೆ ಎಂದು ಇಲ್ಲಿ ಪರಿಗಣಿಸಲಾಗುವುದಿಲ್ಲ. ಇದು ಅತ್ಯಾಚಾರಕ್ಕೆ ಸಮಾನ. ಈ ಅಪರಾಧಕ್ಕೆ ಜೈಲು ಶಿಕ್ಷೆಯೇ ಗತಿ. ಅಲ್ಲದೆ, ಚೀನಾದ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ ಗರ್ಭಪಾತದಲ್ಲಿ ಶಾಲಾ ಬಾಲಕಿಯರ ಪಾಲು ಶೇ.30ರಷ್ಟು.
ಹೆಸರನ್ನು ಬಹಿರಂಗಪಡಿಸಲಾಗದ ಆ ಬಾಲೆ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ತಾಯಿಯೇನಲ್ಲ. ಪೆರು ದೇಶದ ಲೀನಾ ಮೆಡಿನಾ ಎಂಬ ಬಾಲೆ 5 ವರ್ಷ 8 ತಿಂಗಳು ಇದ್ದಾಗ ಗರ್ಭ ಧರಿಸಿ, 6 ವರ್ಷ 5 ತಿಂಗಳು ಆಗಿದ್ದಾಗ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿ ದಾಖಲೆ ಬರೆದಿದ್ದಾಳೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ