ಬುಧವಾರ, ಜುಲೈ 25, 2012

ಗಂಡನ ರೇಪ್ ಮಾಡಿ ಕೊಂದ ಐವರು ಹೆಂಡತಿಯರು

ನೈಜೀರಿಯಾ, ಜು. 25 : ತನ್ನ ಅತ್ಯಂತ ಕಿರಿಯ ಹೆಂಡತಿಗೆ ಹಾಸಿಗೆಯಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದ ಎಂಬ ಕಾರಣಕ್ಕೆ ಹೊಟ್ಟೆಕಿಚ್ಚಿನಿಂದ ರೊಚ್ಚಿಗೆದ್ದ ಉಳಿದ ಐವರು ಹೆಂಡಂದಿರು ಗಂಡನ ಜೊತೆ ಒಟ್ಟಾರೆಯಾಗಿ ಮ್ಯಾರಾಥಾನ್ ಕಾಮಕೇಳಿಗಿಳಿದು ಹಾಸಿಗೆಯಲ್ಲಿಯೇ ಕೊಂದ ವಿಲಕ್ಷಣ ಘಟನೆ ನೈಜೀರಿಯಾದಲ್ಲಿ ಮಂಗಳವಾರ ನಡೆದಿದೆ.
ಒಗಬಡಿಬೋದ ಒರೊಂಕೊ ಒನೊಜಾ ಅತ್ಯಂತ ಶ್ರೀಮಂತ ಉದ್ಯಮಿ. ಒಬ್ಬಳೇ ಹೆಂಡತಿಯನ್ನು ಸಾಕುವುದು ಕಷ್ಟಕರವಾಗಿರುವ ಇಂದಿನ ಜಗತ್ತಿನಲ್ಲಿ, ಆತ ಶ್ರೀಮಂತನಾಗಿದ್ದರಿಂದ ಒಂದೆರಡಲ್ಲ ಆರು ಮಂದಿಯನ್ನು ವರಿಸಿದ್ದ. ಇಷ್ಟೊಂದು ತಪ್ಪು ಸಾಕಾಗಲಿಲ್ಲವೆಂಬಂತೆ ತನ್ನ ಕಿರಿಯ ವಯಸ್ಸಿನ ಹೆಂಡತಿಯೊಂದಿಗೆ ಹೆಚ್ಚಿನ ಸಮಯ ಸರಸದಲ್ಲಿ ತೊಡಗಿರುತ್ತಿದ್ದ.
ಆರು ಹೆಂಡಂದಿರನ್ನು ಇಟ್ಟುಕೊಂಡ ಮೇಲೆ ಆರು ಪತ್ನಿಯರೊಂದಿಗೂ ಅಷ್ಟೇ ಸಮಯ ಹಾಸಿಗೆಯಲ್ಲಿ ಕಳೆಯಬೇಕು, ಅದು ನಮ್ಮ ಹಕ್ಕು ಎಂಬ ವಾದಕ್ಕಿಳಿದ ಉಳಿದ ಐವರು, ಚಾಕು, ಹಾಕಿ ಸ್ಟಿಕ್, ಸೌಟು, ಲಟ್ಟಣಿಗೆ ಹಿಡಿದು ನೇರವಾಗಿ ಶಯ್ಯಾಗೃಹಕ್ಕೆ ನುಗ್ಗಿದ್ದಾರೆ. ಅಷ್ಟೊತ್ತಿಗೆ ಬಾರ್‌ಗೆ ಹೋಗಿ ವಾಪಸ್ ಬಂದಿದ್ದ ಆತ ಕಿರಿಯಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.
ಇದು ಪ್ರತಿದಿನ ನಡೆಯುತ್ತಿದ್ದರಿಂದ ಸಿಟ್ಟಿಗೆದ್ದಿದ್ದ ಉಳಿದ ಹೆಂಡತಿಯರು ಒಂದು ಸೇರಿ ಸಂಚು ರೂಪಿಸಿದ್ದಾರೆ. ಸಿಕ್ಕಾಪಟ್ಟೆ ಕೋಪೋದ್ರಿಕ್ತರಾಗಿದ್ದ ಅವರು ತಮ್ಮ ಜೊತೆಯೂ ಕಾಮಕೇಳಿ ನಡೆಸೆಂದು ದುಂಬಾಲು ಬಿದ್ದಿದ್ದಾರೆ. ಮೊದಲು ಆತ ಇದನ್ನು ಪ್ರತಿರೋಧಿಸಿದ್ದಾನೆ. ಆದರೆ ಐವರ ಶಕ್ತಿಯ ಮುಂದೆ ಒಬ್ಬನ ಆಟ ನಡೆಯಲಿಲ್ಲ. ಐವರೂ ಸೇರಿ ಆತನ ಮೇಲೆ ಮುಗಿಬಿದ್ದಿದ್ದಾರೆ.
ಕೊನೆಯ ಕಿರಿಯ ಹೆಂಡತಿಯನ್ನು ಪಕ್ಕಕ್ಕೆ ತಳ್ಳಿ ನಾಲ್ವರು ಹೆಂಡತಿಯರು ಗಂಡನ ಮೇಲೆ ಅಕ್ಷರಶಃ ಲೈಂಗಿಕ ದಬ್ಬಾಳಿಕೆ ನಡೆಸಿದ್ದಾರೆ. ಬೇರೆ ದಾರಿಯಿಲ್ಲದೆ ಆತ ಅವರ ಪರವಶನಾಗಿ ನಾಲ್ವರೊಡನೆ ಸಾಮೂಹಿಕವಾಗಿ ಮಿಲನ ಮಹೋತ್ಸವ ಆಚರಿಸಿಕೊಳ್ಳಲು ಆರಂಭಿಸಿದ್ದಾನೆ. ಅದು ಆತ ಮಾಡಿದ ಕಟ್ಟಕಡೆಯ ತಪ್ಪು. ನಾಲ್ವರು ತೃಪ್ತಿಪಟ್ಟುಕೊಂಡ ಮೇಲೆ ಐದನೇಯವಳೂ ಸಿದ್ಧಳಾದ ಘಳಿಗೆ ಆತನ ಉಸಿರೂ ನಿಂತಿದೆ.
ಗಂಡ ಹಾಸಿಗೆಯಲ್ಲಿಯೇ ಅಸುನೀಗಿದ್ದಾನೆ ಎಂದು ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಐವರು ಹೆಂಡತಿಯರು ಕಾಡೊಳಗೆ ಓಡಿ ಪರಾರಿಯಾಗಿದ್ದಾರೆ ಎಂದು ಕಿರಿಯ ಹೆಂಡತಿ ಪೊಲೀಸರಿಗೆ ತಿಳಿಸಿದ್ದಾಳೆ. ಇದೊಂದು ಅಸಾಮಾನ್ಯ ಘಟನೆ ಎಂದು ಪರಿಗಣಿಸಿರುವ ಪೊಲೀಸರು ಹೆಂಡತಿಯರ ಮೇಲೆ ಅತ್ಯಾಚಾರ ಎಸಗಿದ ಮತ್ತು ಕೊಲೆ ಮಾಡಿದ ಆರೋಪ ಹೊರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ