ಲಂಡನ್, ಅ.16: ಇದು ಉಲ್ಟಾ ಕೇಸ್. ಪುರುಷರನ್ನು ಅಪಹರಿಸಿ, ಅವರಿಗೆ ಮತ್ತುಬರಿಸುವ ಔಷಧ ನೀಡಿ, ಅತ್ಯಾಚಾರವೆಸಗಿ, ಅವರ ವೀರ್ಯವನ್ನು ಶೇಖರಿಸಿದ ಯುವತಿಯರ ತಂಡವೊಂದನ್ನು ಜಿಂಬಾಬ್ವೆನಲ್ಲಿ ಪೊಲೀಸರು ಬಂಧಿಸಿದ್ದಾರೆ. ಗ್ವೇರು, ಹರಾರೆ ಮತ್ತು ಪಶ್ಚಿಮ ಮಾಶೋನಾ ಲ್ಯಾಂಡಿನಲ್ಲಿ ಅನುಮಾನಾಸ್ಪದವಾಗಿ ಪುರುಷರನ್ನು ಕಾರುಗಳಲ್ಲಿ 'ಲಿಫ್ಟ್' ಮಾಡಿ, ಅವರ ಮೇಲೆ ಅತ್ಯಾಚಾರವೆಸಗಿ, ವೀರ್ಯವನ್ನು 'ಲಿಫ್ಟ್' ಮಾಡುತ್ತಿದ್ದ ಆರೋಪದ ಮೇಲೆ ಈ ಯುವತಿಯರ ತಂಡವನ್ನು ಬಂಧಿಸಲಾಗಿದೆ. ಈ ರೀತಿ 'ಲಿಫ್ಟ್'ಗೆ ಬಳಸಿದ ಕಾರೊಂದನ್ನು ವಶಪಡಿಸಿಕೊಂಡಾಗ, ಅದರಲ್ಲಿ ಬಳಸಿದ 33 ಕಾಂಡೋಮ್ ಗಳು ಪತ್ತೆಯಾದಾಗ ಇಡೀ ವೀರ್ಯ ವೃತ್ತಾಂತ ಬಿಚ್ಚಿಕೊಂಡಿದೆ.
ಹೀಗೆ ಕಾರುಗಳಲ್ಲಿ 'ಲಿಫ್ಟ್' ಆದ ಪುರುಷರನ್ನು ನಿರ್ದಿಷ್ಟ ಸ್ಥಳಕ್ಕೆ ಹೊತ್ತೊಯ್ದು ಅವರನ್ನು ಬಲವಂತ ಸಂಭೋಗಕ್ಕೆ ಗುರಿಪಡಿಸಿ, ಅವರಿಂದ ವೀರ್ಯ ಸಂಪಾದಿಸಿದ ಬಳಿಕ ಅತ್ಯಾಚಾರಕ್ಕೊಳಗಾದ ಪುರುಷರನ್ನು ತರುಣಿಯರು ರಸ್ತೆ ಬದಿ ಬಿಟ್ಟು ಹೋಗುತ್ತಿದ್ದರು. ಈ ಯುವತಿಯರೆಲ್ಲ ನೈಟ್ ಕ್ಲಬ್ಬುಗಳಲ್ಲಿನ ನರ್ತಕಿಯರು ಎನ್ನಲಾಗಿದೆ. ಪೊಲೀಸರು ಈಗ 'ಬಾಧಿತ' ಪುರುಷರ ಡಿಎನ್ಎ ಮಾದರಿ ತೆಗೆದುಕೊಂಡು ಅವುಗಳನ್ನು ಕಾಂಡೋಮಿನಲ್ಲಿರುವ ವೀರ್ಯದೊಂದಿಗೆ ಪರೀಕ್ಷಿಸಿ, ಯುವತಿಯರ ಅಪರಾಧವನ್ನು ಸಾಬೀತುಪಡಿಸಲು ನಿರ್ಧರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ