ಶುಕ್ರವಾರ, ಅಕ್ಟೋಬರ್ 21, 2011

ಸೆಕ್ಸ್ ಸೀಕ್ರೇಟ್ಸ್ ಜೀವಂತ,ಗಡ್ಡಾಫಿ ಯುಗ ಅಂತ್ಯ

ಟ್ರಿಪೋಲಿ, ವಿಚಿತ್ರ, ವಿಕ್ಷಿಪ್ತ ಮನೋಭಾವದ ಕುತೂಹಲಕಾರಿ ಸರ್ವಾಧಿಕಾರಿ ಮುಹಮ್ಮರ್ ಗಡ್ಡಾಫಿ ಯುಗ ಅಂತ್ಯವಾಗಿದೆ. ಲಿಬಿಯಾದಲ್ಲಿ ಸೀಕ್ರೇಟ್ ಆಗಿ ಗಡ್ಡಾಫಿ ಅಂತ್ಯ. ಇದರ ಬೆನ್ನ ಹಿಂದೆ ಗಡ್ಡಾಫಿ ಕೊಂದವರು ಯಾರು, ಗಡ್ಡಾಫಿ ಸೆಕ್ಸ್ ಸೀಕ್ರೇಟ್ ಗಳ ಬಗ್ಗೆ ನಾನಾ ಕಥೆಗಳು ಹುಟ್ಟಿಕೊಳ್ಳುತ್ತಿದೆ. 42 ವರ್ಷಗಳ ಕಾಲ ಲಿಬಿಯಾ ದೇಶವನ್ನು ಅಳಿದ ಗಡ್ಡಾಫಿ ಒಂದು ನೋಟಕ್ಕೆ ತಲೆಗಳನ್ನು ಉರುಳಿಸುವ ಶಕ್ತಿಯಿತ್ತು. ಆತನ ಬೆಂಗಾವಲಿಗೆ ಇದ್ದ ಸಶಸ್ತ್ರ ಪಡೆಯಲ್ಲೇ ಸ್ತ್ರೀಶಕ್ತಿಗೆ ತುಂಬಿತ್ತು. ಅವನ ಬೆಂಗಾವಲಿನ ಪಡೆಯಲ್ಲಿದ್ದ ಸುಂದರ ಕನ್ಯೆಯರನ್ನು 'ಕಿಲ್ಲಿಂಗ್ ಮೆಷಿನ್' ಎಂದೇ ಕರೆಯಲಾಗುತ್ತಿತ್ತು. ಗಡ್ಡಾಫಿಗೆ ತೆಳ್ಳಗೆ ಬೆಳ್ಳಗೆ ಇರುವ ನರ್ಸ್ ಗಳ ಮೋಹ ಅಂಟಿಕೊಂಡಿತ್ತು. ಇಂಗ್ಲೀಷ್ ನರ್ಸ್, ಲೇಡಿ ಬಾಡಿಗಾರ್ಡ್ ನಡುವೆ ಈ ಸ್ತ್ರೀಲೋಲ ಸುತ್ತುತ್ತಿದ್ದರೆ ಅವನ ಶತ್ರುಗಳು ಹೊಟ್ಟೆಊರಿಯಿಂದಲೇ ಸಾಯುತ್ತಿದ್ದರಂತೆ.ಗಡ್ಡಾಫಿ ತೆವಲುಗಳ ರಾಜ: ನರ್ಸ್ ಗೌಲೀನಾ ಕೊಲೊನಿತ್ಸಕಾ ಎಂಬುವಳು ಗಡ್ಡಾಫಿಯ ಬಹುಕಾಲದ ಮನದನ್ನೆಯಾಗಿದ್ದಳು. ಲೇಡಿ ಬಾಡಿಗಾರ್ಡ್ ಗಳ ನಡುವೆ ನರ್ಸ್ ಗೌಲೀನಾ ಸದಾ ಇರುತ್ತಿದ್ದಳು. ಮೇ 2011ರಲ್ಲಿ ಗೌಲೀನಾಳನ್ನು ಉಪಪತ್ನಿಯಾಗಿ ಗಡ್ಡಾಫಿ ಇಟ್ಟುಕೊಂಡಿರುವ ಬಗ್ಗೆ ಪುಖಾರು ಎದ್ದಿತ್ತು. ಗಡ್ಡಾಫಿಗೆ ನರ್ಸ್ ಮೇಲೆ ಎಷ್ಟರಮಟ್ಟಿಗೆ ಮೋಹ ಬೆಳೆದಿತ್ತೆಂದರೆ ಅವಳ ಡ್ರೆಸ್ ಅನ್ನು ಧರಿಸಿ ಸಂಭೋಗ ಕ್ರಿಯೆಗೆ ತೊಡಗುತ್ತಿದ್ದನಂತೆ. ಅದು ಬೇಸ್ ಮೆಂಟ್ ಅಥವಾ ಅಂಡರ್ ಗ್ರೌಂಡ್ ಕಟ್ಟಡದಲ್ಲಿ ಮಾತ್ರ ಆತ ದೇಹಸಂಪರ್ಕದ ಕಾರ್ಯಕ್ರಮ ಜರುಗಿಸುತ್ತಿದ್ದ. ಅನೇಕ ಫೋಬಿಯಾದಿಂದ ಬಳಲುತ್ತಿದ್ದ ಗಡ್ಡಾಫಿಗೆ ನೀರನ ಮೇಲೆ ವಿಮಾನದಲ್ಲಿ ಹಾರುವುದೆಂದರೆ ಗಡಗಡ ಎಂದು ನಡುಗುತ್ತಿದ್ದ. ಎತ್ತರದ ಕಟ್ಟಡದಲ್ಲಿರುವುದಕ್ಕಿಂತ ನೆಲ ಅಂತಸ್ತಿನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಇಟಲಿಯ ಪ್ರತಿಷ್ಠಿತ ಜ್ಯುವೆಂಟಸ್ ಫುಟ್‌ಬಾಲ್ ಕ್ಲಬ್‌ನಲ್ಲಿ ಅಪಾರ ಷೇರುಗಳನ್ನು ಹೊಂದಿದ್ದಾನೆ. ಜಗತ್ತಿನ ಹಲವು ದೇಶಗಳಲ್ಲಿ ಭಾರಿ ಆಸ್ತಿಪಾಸ್ತಿಗಳಿವೆ. ಗಡಾಫಿಯ ಇಬ್ಬರು ಪತ್ನಿಯರ ಎಂಟು ಮಂದಿ ಮಕ್ಕಳು ಹಲವು ದೇಶಗಳಲ್ಲಿ ಉನ್ನತ ಅಧಿಕಾರದಲ್ಲಿದ್ದಾರೆ. ಗಡ್ಡಾಫಿ ಕೊನೆಯಾದರೂ ಆತನ ಬಗೆಗಿನ ಕಥೆಗಳಿಗೆ ಅಂತ್ಯವಿಲ್ಲ.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ