ಈ ದೇಹದಿಂದ ದೂರವಾದೆ ಏಕೆ ಪ್ರಿಯತಮೆ ಎಂದು ಗೋಗರೆಯುವರಿಗೆ ಹೊಸ ಉಪಕರಣ ಬಂದಿದೆ. ಅದಕ್ಕೆ ಕಿಸ್ಸಿಂಗ್ ರೊಬೋಟ್ ಎಂದು ಹೆಸರಿಡಲಾಗಿದೆ. ಬರೇ ತಲೆ ಮಾತ್ರ ಇರುತ್ತದೆ. ಕಣ್ಣಿರುವುದಿಲ್ಲ. ಕಿವಿಯಿರುವುದಿಲ್ಲ. ತಲೆಯಲ್ಲಿ ಕೂದಲಿರುವುದಿಲ್ಲ. ಆದರೆ ಚೆಂದದ ತುಟಿಯಿರುತ್ತದೆ. ಪ್ರಿಯತಮೆಯೋ ಅಥವಾ ಪ್ರಿಯತಮನೋ ದೂರದ ಊರಿಗೆ ಸೇರಿಕೊಂಡರೆ ಮುತ್ತು ಕೊಡೋದು ಹೇಗಪ್ಪಾ ಛೇ ಎನ್ನುವವರ ಮನಸ್ಸನ್ನು ತಣಿಸಲು ಈ ಕಿಸ್ಸಿಂಗ್ ರೊಬೊಟನ್ನು ತಯಾರಿಸಲಾಗಿದೆ. ಈ ಕಿಸ್ಸಿಂಗ್ ರೊಬೋಟ್ ತಲೆಯ ಹಿಂಬಂದಿಯ ಯುಎಸ್‌ಬಿ ವಯರನ್ನು ಕಂಪ್ಯೂಟರಿಗೆ ಚುಚ್ಚಬೇಕಾಗುತ್ತದೆ. ನೀವು ಯಾರಿಗೆ ಕಿಸ್ ಮಾಡಲು ಬಯಸುತ್ತೀರಿ ಅವರೂ ಕೂಡ ಇದೇ ರೀತಿ ಅವರ ಕಂಪ್ಯೂಟರಿಗೆ ಕಿಸ್ಸಿಂಗ್ ರೊಬೋಟನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಆನಂತರ ಇಂಟರ್ನೆಟ್ ಮುಖಾಂತರ ಈ ಕಿಸ್ಸಿಂಗ್ ರೊಬೋಟನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಿಕೊಳ್ಳಬೇಕು. ಆಗ ಈ ಕಿಸ್ಸಿಂಗ್ ರೊಬೋಟಿಗೆ ಜೀವ ಬಂದು ನೀ ನನಗೆ ಬೇಕು ಎನ್ನುವಂತೆ ಫುಲ್ ಸ್ಟಡಿಯಾಗಿರುತ್ತದೆ. ಈ ವೇಳೆ ಅದರ ತುಟಿಗೆ ಕಚ್ಚಿದರೆ ಆ ಮೂಲಕ ಸಂಕೇತ ರವಾನೆಯಾಗಿ ಅತ್ತಬದಿಯಲ್ಲಿರುವ ಕಿಸ್ಸಿಂಗ್ ರೊಬೋಟಿನ ತುಟಿ ಅದೇ ರೀತಿ ವರ್ತಿಸುತ್ತದೆ. ಅತ್ತ ಕಡೆಯ ಕಿಲಾಡಿಯ ತುಟಿಯ ಚಲನವಲನಗಳಂತೆ ಇತ್ತ ಬದಿಯ ಕಿಸ್ಸಿಂಗ್ ರೊಬೋಟ್ ಕೂಡ ವರ್ತಿಸುತ್ತದೆ. ಇಂತಹಾ ಚಟುವಟಿಕೆಯಿಂದ ಒಬ್ಬರಿಗೊಬ್ಬರು ಮುತ್ತು ಕೊಟ್ಟಂತಾಗುತ್ತದೆ. ಇಂತಹಾ ಚಟುವಟಿಕೆಗಳು ಎಲ್ಲರಿಗೂ ಇಷ್ಟವಾಗಲ್ಲ. ಆದರೆ ಇಷ್ಟವಾಗುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ದೂರ ದೂರದಲ್ಲಿರುವ ಪ್ರೇಮಿಗಳಿಗೆ ಬಹುಶಃ ಇಷ್ಟವಾಗಬಹುದೇನೋ... ಶೀಘ್ರವೇ ಮಾರುಕಟ್ಟೆಗೆ ಬರಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ