ಸೋಮವಾರ, ಆಗಸ್ಟ್ 13, 2012

ಕಾಲೇಜು ಯುವತಿಯರಿಗೆ ನಗ್ನ ಉದ್ಯೋಗಾವಕಾಶ (ಕೇಡುಗಾಲ)

ಲಂಡನ್, ಇಲ್ಲಿನ ನ್ಯೂಕೆಸಲ್ ನಗರದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸುವ ಬಡ ಕಾಲೇಜು ಹೆಣ್ಣುಮಕ್ಕಳಿಗೆ ವಿಶೇಷ ನಗ್ನ ಉದ್ಯೋಗಾವಕಾಶ ಲಭಿಸಿದೆ. ಅದೇನಪಾ ಅಂದರೆ ಈ ಹೆಣ್ಣುಮಕ್ಕಳು ನಗ್ನರಾಗಿ ಕ್ಲೀನಿಂಗ್ ಕೆಲಸ ಮಾಡುವುದು ಮತ್ತು ಹೋಟೆಲ್ ರೂಮುಗಳಲ್ಲಿ ಖಾಸಗಿಯಾಗಿ ನಗ್ನ ನೃತ್ಯ ಮಾಡುವುದು. ಇದಕ್ಕಾಗಿ ಒಂದು ಗಂಟೆಗೆ 70 ಪೌಂಡ್ ಹಣ (ಅರವತ್ತು ನಿಮಿಷಕ್ಕೆ 6 ಸಾವಿರ ರೂಪಾಯಿ) ಪ್ರಾಪ್ತಿಯಾಗಲಿದೆ.
Adults-only ಎಂಬ ಸಂಸ್ಥೆಯು ಈ ಅವಕಾಶವನ್ನು ಕಲ್ಪಿಸಿದೆ. ಟ್ವಿಟ್ಟರ್ ಮೂಲಕ ವಿಶೇಷ ನಗ್ನ ಉದ್ಯೋಗಾವಕಾಶ ಸಂದೇಶ ಬಿತ್ತರಿಸುತ್ತಿರುವ ಈ ಸಂಸ್ಥೆಯು ಮನೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಹೋಟೆಲು ರೂಮುಗಳಲ್ಲಿ body-to-body massage ಸೇವೆ ಕಲ್ಪಿಸಲು ಕಾಲೇಜು ವ್ಯಾಸಂಗ ಮಾಡುವ ಬಡ ಹೆಣ್ಣು ಮಕ್ಕಳಿಗೆ ಆಹ್ವಾನ ನೀಡಿದೆ.
ಸಂಸ್ಥೆಯ ಈ ಬೇಡಿಕೆಗೆ ಕಾಲೇಜು ಕ್ಯಾಂಪಸ್ಸುಗಳಲ್ಲಿ ಗೊಣಗಾಟ ಶುರುವಾಗಿದೆ. ಆದರೂ ಸ್ಪಂದನೆ ದೊರಕುತ್ತಿದ್ದು, 18 ವರ್ಷದ ದಾಟಿದ ಕಾಲೇಜು ಯುವತಿಯರಿಗಾಗಿ ಮಾತ್ರವೇ ನಾವು ಇಂತಹ ಅವಕಾಶ ಕಲ್ಪಿಸುತ್ತಿದ್ದೇವೆ. ಅಂತಹವರಿಗೆ ಇಷ್ಟವಿದ್ದಲ್ಲಿ ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಸಂಸ್ಥೆಯ ಮ್ಯಾನೇಜರ್ ಜಾನಿ ಡೇವಿಸನ್ ಹೇಳಿದ್ದಾರೆ.
ನಾನು ಮೇಲ್ವರ್ಗದ ಸೇವೆ ಒದಗಿಸುತ್ತಿದ್ದೇನೆ. ಅದಕ್ಕಾಗಿ ಯುವತಿಯರು ಅನುಭವಿಗಳಾಗಿರಬೇಕು ಮತ್ತು ಆತ್ಮವಿಶ್ವಾಸದಿಂದ ಗಿರಾಕಿಗಳ ಸೇವೆಗೆ ನಿಲ್ಲಬೇಕು ಎಂದು ಆಶಿಸುವುದಾಗಿ ಆಕೆ ಹೇಳಿದ್ದಾರೆ.
ಬಡ ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿಕೊಂಡು ಇಂತಹ ಉದ್ಯೋಗಾವಕಾಶ ಕಲ್ಪಿಸುತ್ತಿರುವುದರ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಈ ನಗ್ನೋದ್ಯೋಗ ಕಾನೂನು ಸಮ್ಮತವೇ ಇರಬಹುದು. ಆದರೆ ನೈತಿಕತೆಗೆ ವಿರುದ್ಧವಾಗಿದೆ. ಬಡ ಹೆಣ್ಣುಮಕ್ಕಳಿಗೆ ಉದ್ಯೋಗ ಮುಖ್ಯವಾಗಿ ಹಣದತ್ತ ಮನಸೋಲಬಹುದು. ಆದರೆ ಇಷ್ಟು ಕೆಳಮಟ್ಟಕ್ಕೆ ಇಳಿಯುವುದು ಬೇಡ ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ