ಶುಕ್ರವಾರ, ಡಿಸೆಂಬರ್ 21, 2012

ಅಮೆರಿಕನ್ನರು 'ಪ್ರಳಯದ ಸೆಕ್ಸ್' ಮಂತ್ರ ಜಪಿಸುತ್ತಿದ್ದಾರೆ. (ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆಯಂತೆ.)


ಪ್ರಳಯದ ಗುಂಗಿನಲ್ಲಿ ಮೈಥುನದ ಅನ್ವೇಷಣೆ ವಾಷಿಂಗ್ಟನ್, ಡಿ.21: ಅಜ್ಜಿಗೆ ಅರಿವೆ ಚಿಂತೆಯಾದರೆ ಮೊಮ್ಮಗಳಿಗೆ ಇನ್ನೇನೋ ಚಿಂತೆಯಂತೆ ಹಾಗೆ ಜಗತ್ತಿನೆಲ್ಲಡೆ ಪ್ರಳಯ ಸಂಭವಿಸಿತ್ತದೆ ಎಂದು ಜನ ಚಿಂತಾಕ್ರಾಂತರಾಗಿರುವಾಗ ಬಹಳಷ್ಟು ಅಮೆರಿಕನ್ನರು ಮೊಮ್ಮಗಳ ಮಾದರಿಯಲ್ಲಿ 'ಅದರ ಬಗ್ಗೆ' ಚಿಂತಿಸುತ್ತಿದ್ದಾರೆ. ಹೌದು 'ಮಾಯನ್ ಕ್ಯಾಲೆಂಡರ್ ಪ್ರಕಾರ ಪ್ರಳಯ ಸಂಭವಿಸುತ್ತದೆ' ಎಂಬ ಮಾಯೆಗೆ ಸಿಲುಕಿ ಅನೇಕ ಅಮೆರಿಕನ್ನರು 'ಪ್ರಳಯದ ಸೆಕ್ಸ್' ಮಂತ್ರ ಜಪಿಸುತ್ತಿದ್ದಾರೆ. ಬಗ್ಗೆ ಅಂತರ್ಜಾಲದಲ್ಲಿ ಆಹ್ವಾನ ನೀಡಿರುವ ಅಮೆರಿಕನ್ನರು, ಸಾರ್ವಜನಿಕ ಜಾಹೀರಾತುಗಳನ್ನೂ ನೀಡಿದ್ದಾರೆ. 38 ವರ್ಷದ ವ್ಯಕ್ತಿಯೊಬ್ಬರು 'ವಿಶ್ವದ ಅಂಚಿನಲ್ಲಿ ಕೊನೆಯ ಬಾರಿಗೆ ಅದೂ ನೆರವೇರಲಿ' ಎಂದು Craigslist ಎಂಬ ವೆಬ್ ಸೈಟ್ ನಲ್ಲಿ ವರ್ಗೀಕೃತ ಜಾಹೀರಾತು ಹೊರಡಿಸಿದ್ದಾನೆ'ಏನಾದರೂ ಸಾಹಸ ಮಾಡಬೇಕು ಅನಿಸುತ್ತಿದೆಯಾ? ನೀವು ಸದಾ ಯಾವುದನ್ನು ಮಾಡಲು ಬಯಸುತ್ತಿದ್ದರೋ ಆದರೆ ಅದನ್ನೆಂದಿಗೂ ಮಾಡಲಿಲ್ಲವೋ ಅದನ್ನೇ ಈಗ ಮಾಡಬಹುದು. ನಿಮಗಿದೋ ಸ್ವಾಗತ' ಎಂದು ಆತ ಅದಕ್ಕೆ ಆಹ್ವಾನ ನೀಡಿದ್ದಾನೆ. ಮಹಿಳೆಯರೂ ಇದಕ್ಕೆ ಹಿಂಜರಿದಿಲ್ಲ. ಅವರೂ ಇಂತಹುದೇ ಜಾಹೀರಾತುಗಳನ್ನು ಆನ್ ಲೈನ್ ಮೂಲಕ ನೀಡುತ್ತಿದ್ದಾರೆ. 'ಅಷ್ಟಕ್ಕೂ ಇಂದು ರಾತ್ರಿಗೆ ವಿಶ್ವ ಕೊನೆಗೊಳ್ಳುವುದಾದರೆ ಅದನ್ನು ಏಕೆ ತಪ್ಪಿಸಬೇಕು. ಅದೂ ನಡೆದುಹೋಗಲಿ. ರಾತ್ರಿ ಪಾರ್ಟಿಗಾಗಿ ನಾನು ಕಾಯುತ್ತಿದ್ದೇನೆ. ನಾನೇಕೆ ಹಿಂಜರಿಯಲಿ. ಎಲ್ಲರಿಗೂ ತೃಪ್ತಿ ಸಿಗಲಿ' ಎಂದು ಕೆಲವು ಯುವತಿಯರು ಪ್ರತ್ಯುತ್ತರ ನೀಡಿ ಹುರಿದುಂಬಿಸಿದ್ದಾರೆ.

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ